ಕಲಿಯುಗ ಮನ್ಮಥ ದಾಸ - The Indic Lyrics Database

ಕಲಿಯುಗ ಮನ್ಮಥ ದಾಸ

गीतकार - Hamsalekha | गायक - S. P. Balasubramanyam, Shivaraj | संगीत - Hamsalekha | फ़िल्म - Avane Nanna Ganda | वर्ष - 1989

Song link

View in Roman

ಭಂ ಭಂ ಶಂಬು ಶರಣಂ |೩|

ಕಲಿಯುಗ ಮನ್ಮಥ ದಾಸ
ನಿನಗ್ಯಾಕೋ ಕವಿಯ ವೇಷ
ಎರಡನೆ ಮದುವೆಯ ಕೆಲಸ
ಹೆಬ್ಬಾವಿನ ಜೊತೆಯಲಿ ಸಾರಸ
ಮೀಸೆ ಇರದವನು ಹೆಂಡಿರ ತೋರುವವನು
ಬ್ಯಾದೋ ಈ ಬುಡುಬುಡಿಕೆ
ಆಸೆ ತೊರೆದವನು ಬುದ್ಧನೆ ಆಗುವನು
ಹೊರಟೆ ಶೇಷಾಚಲಕೆ

ಕಲಿಯುಗ ಮನ್ಮಥ ದಾಸ ಅಣ್ಣಾ
ನಿನಗ್ಯಾಕೋ ಕವಿಯ ವೇಷ
ಎರಡನೆ ಮದುವೆಯ ಕೆಲಸ
ಹೆಬ್ಬಾವಿನ ಜೊತೆಯಲಿ ಸಾರಸ

ಹರನಿಗುನು ಎರಡು ಶ್ರೀ ಹರಿಗೂ
ಎರಡು  ಸತಿಯರು ಇರುವಾಗ 
ದೇವರುಗಳೇ ಸುಮ್ಮನೆ ಇರುವಾಗ

ಒಬ್ಬಾಳ ತಿಥಿಯಾಗಿ ಹೊಸಬಾಳು ಸತಿಯಾಗಿ 
ಜೊತೆಯಲು ನಗುವಾಗ ಅಳಿಯಂದ್ರೆ ಯಾಕೋ ಮುನಿರೋಗ

ಗಂಡನದಲ್ಲ ಈ ಗೋಡವೇ
ಇಲ್ಲಿ ಹೆಂಡತಿಗಾಗಿ ಮರು ಮದುವೆ
ಗಂಗೆ ಪಾರ್ವತಿಯರ ನಡುವೆ
ಇರಲಿಲ್ಲಪ್ಪಾ ಈ ಗೋಡವೆ

ಪರರ ಹೆಂಡಿರನ್ನ ಭ್ರಮಿಸಿ ನೋಡೋ ಕಣ್ಣಾ
ಮೆರವಣಿಗೆ ತೆಗೆಯೋ ಮಂಗಣ್ಣ

ಕಲಿಯುಗ ಮನ್ಮಥ ದಾಸ ಅಪ್ಪಾ
ನಿನಗ್ಯಾಕೋ ಕವಿಯ ವೇಷ
ಎರಡನೆ ಮದುವೆಯ ಕೆಲಸ
ಹೆಬ್ಬವಿನ ಜೊತೆಯಲಿ ಸಾರಸ

ಓಂ ನಮಃ ಶಿವಾಯ ಓಂ ನಮಃ ಶಿವಾಯ

ಐದು ದೊಡ್ಡ ಜನರೂ ಒಬ್ಬ ದೊಡ್ಡ ಸತ್ಯ
ವಾರಿಸಿದ ಕಥೆ ಇಲ್ಲವೇ
ಋಷಿಮುನಿಗಳು ಸಮ್ಮತಿ ಕೊಡಲಿಲ್ಲವೇ

ಮದುವೆ ಗಿಂಥ ಮುಂಚೆ
ಸೂರ್ಯನನ್ನು ಬೇಡಿ
ಕುಂತಿ ಹೇರಲಿಲ್ಲವೇ ಆ ವನಿತೆ ರಾಣಿ ಆಗಲಿಲ್ಲವೇ

ಕಥೆಯನು ಬರೆಯುವುದು ಸುಲಭ
ವ್ಯಥೆ ಅನುಭವಿಸುವುದು ಕಷ್ಟ ಪಾಪ
ಬಯಲಿ ಹೇಳುವುದು ಸುಲಭ
ತಂಗಲು ತಿನ್ನುವುದು ಕಷ್ಟ

ಪರರ ಹೆಂಡಿರನ್ನ ಭ್ರಮಿಸಿ ನೋಡೋ ಕಣ್ಣಾ
ಮೆರವಣಿಗೆ ತೆಗೆಯೋ ಮಂಗಣ್ಣ

ಕಲಿಯುಗ ಮನ್ಮಥ ದಾಸ ಅಣ್ಣಾ
ನಿನಗ್ಯಾಕೋ ಕವಿಯ ವೇಷ
ಎರಡನೆ ಮದುವೆಯ ಕೆಲಸ
ಹೆಬ್ಬಾವಿನ ಜೊತೆಯಲಿ ಸಾರಸ

ಮೀಸೆ ಇರದವನು ಹೆಂಡಿರ ತೋರುವವನು
ಬ್ಯಾದೋ ಈ ಬುಡುಬುಡಿಕೆ
ಆಸೆ ತೊರೆದವನು ಬುದ್ಧನೆ ಆಗುವನು
ಹೊರಟೆ ಶೇಷಾಚಲಕೆ

ಕಲಿಯುಗ ಮನ್ಮಥ ದಾಸ ಅಪ್ಪಾ
ಈ ಹೆಂಡತಿ ಸುಖವೇ ನಷ್ಟ-ಆ?
ಎರಡನೆ ಮದುವೆಯ ಕೆಲಸ
ಹೆಬ್ಬಾವಿನ ಜೊತೆಯಲಿ ಸಾರಸ