ದೂರ ದೂರ - The Indic Lyrics Database

ದೂರ ದೂರ

गीतकार - Kiran Kaverappa | गायक - Vijay Prakash | संगीत - Ashic Arun | फ़िल्म - Baddi Magan Lifu | वर्ष - 2019

View in Roman

ನೀನಿಲ್ಲದ ನನ್ನೆದೆಯ ಬೀದಿಲಿ
ಕಾಡಿರುವೆ ನಾ ಕಾಯಿಸಿದ ಸಮಯ
ಎದುರಿದ್ದರು ಇಂದೇಕೋ ನೀ ದೂರ
ಅಸಹಾಯಕ ಧನಿಯಂತಾಗಿರುವೆ ನಾ
ಹಗಲಿರುಳಿನ ಪರಿವಿಲ್ಲ
ಹುಡುಕಿದೆ ನಾನೇ ನನ್ನಾ
ನೀ ಸಾಗಿರೋ ದಾರಿಲಿ ಉಸಿರೇ ಉಸಿರೇ
ಚೂರರಾಗಿರೋ ಈ ನನ್ನಾ
ಮನಸಿನ ಹಾಳೆಯಣ್ಣ ನೀ ಜೋಡಿಸಿ ಓದಮ್ಮಿ ಉಸಿರೆ
ದೂರ ದೂರ ನೀನಿದ್ದರು ಸನಿಹ
ವಿರಹ ಆವರಿಸಿ ಆಸು ನೀಗಿದೆ ಹೃದಯ
ದೂರ ದೂರ ನೀನಿದ್ದರು ಸನಿಹ
ಕಾಡೋ ನೆನಪೇಕೋ ಈ ಶೋಕದ ಪ್ರಲಯ

ಹೇಳದೆ ಉಳಿದ ಮಾತು ಮೌನದಿ ಮರುಗಿ
ಸೋತಿದೆ ಕಣ್ಣ ಕವಿತೆ
ಸುಮ್ಮನೆ ಜಿನುಗಿ
ಆಸೆಯಾದೆಯಾ ಒಮ್ಮೆ ನೀ ಈ ಜೀವಕೆ
ಏಕಾಂತದ ಈ ಸಂಜೆಲಿ..
ನಿಂಗಾಗಿಯೇ ಕಾಯುವೆ ಎಂದೆಂದಿಗು
ಕೇಳೆ ನೀ ವೇದನೆ ಒಮ್ಮೆಲೆ

ದೂರ ದೂರ ನೀನಿದ್ದರು ಸನಿಹ
ವಿರಹ ಆವರಿಸಿ ಆಸು ನೀಗಿದೆ ಹೃದಯ
ದೂರ ದೂರ ನೀನಿದ್ದರು ಸನಿಹ
ಕಾಡೋ ನೆನಪೇಕೋ ಈ ಶೋಕದ ಪ್ರಲಯ

ದೂರ ದೂರ ನೀ ಸಾಗಿರುವಾಗ
ದಾರಿ ತಿರುವೇಕೋ ನೆನಪಾಗಿದೆ ಈಗ