ಅಣ್ಣ ತಮ್ಮೋರ್ - The Indic Lyrics Database

ಅಣ್ಣ ತಮ್ಮೋರ್

गीतकार - R. N. Jayagopal | गायक - P. Susheela, Sulochana, Rajkumar Bharathi | संगीत - G. K. Venkatesh | फ़िल्म - Gandandre Gandu | वर्ष - 1988

Song link

View in Roman

ಅಣ್ಣ ತಮ್ಮೋರ್ ಈ ಈ ಈ
ಅಣ್ಣಯ್ಯ ತಮ್ಮಯ್ಯ
ಸುಖದ ಹಬ್ಬ ಬಂತು
ಸಂತೋಷ ತುಂಬಿ ತಂತು
ಸುಖದ ಹಬ್ಬ ಬಂತು
ಸಂತೋಷ ತುಂಬಿ ತಂತು
ಬೇವರಿನಾ ಹನಿ ಹನಿ
ಬಂಗಾರ ಆಗಿ ಬಂತು
ದುಡಿಮೆಯೆ ದೈವ ಎನ್ನೊ
ನಂಬಿಕೆ ಫಲ ತಂತು
ಅಕ್ಕ ತಂಗೀರೆ ಬಾರವ್ವ ಸೇರವ್ವ

ಅಣ್ಣಯ್ಯ ತಮ್ಮಯ್ಯ

ತಾನಿ ತಂದಾನಾ ತಾನಿ ತಂದಾನಾ|2|
ತಾನಿ ತಂದಾನಾ|2|
ಲಲ್ಲಾ ಲಲ್ಲಾ ಲಲ್ಲಾ ಲಲ್ಲಾ
ಧುಂ ತನನನ ಧುಂ ತನ ನಾನಾ
ಧುಮ್ ಧುಮ್ ಥಾ

ಕೊಡುವನು ನೆಟ್ಟಾಗ ಕೊಡುವನು ಕೊಟ್ಟಾಗ
ಭೂಮಿ ತಾಯಿ ನಕ್ಕಾಗ ಮನದಲಿ ಆವೇಗ
ಕೈ ಕೇಸರದಾಗ ಬಾಯಿ ಮೊಸರವಾಗ
ಮಣ್ಣಿನ ಮಕ್ಕಳೆಲ್ಲ ಫಲವ ಹಂಚಿ ತಾನ್ನಿ
ಪ್ರೀತಿಯ ಹೊಲೆಯಲಿ ಎಲ್ಲರೂ ತೇಲಿ ಬನ್ನಿ
ಚಿನ್ನದಂಥ ಮಾತು ಇದು ಸತ್ಯವಾದ ಮಾತು|2|

ಈ ದಿನದ ಹೊಸದು ಹರುಷ
ಬರುತ್ತಿರಲಿ ವರುಷ ವರುಷ
ತರುತಿರಲಿ ಸಂತೋಷ
ನಿಜವಾದ ಸಂತೋಷ

ಅಣ್ಣಯ್ಯ ತಮ್ಮಯ್ಯ
ಸುಖದ ಹಬ್ಬ ಬಂತು
ಸಂತೋಷ ತುಂಬಿ ತಂತು
ಬೇವರಿನಾ ಹನಿ ಹನಿ
ಬಂಗಾರ ಆಗಿ ಬಂತು
ದುಡಿಮೆಯೆ ದೈವ ಎನ್ನೊ
ನಂಬಿಕೆ ಫಲ ತಂತು
ಅಕ್ಕ ತಂಗೀರೆ ಬಾರವ್ವ ಸೇರವ್ವ

ಅಣ್ಣಯ್ಯ ತಮ್ಮಯ್ಯ

ಮಾತಿಗೆ ಬರವಿಲ್ಲ ಆಸೆಗೆ ಮಿತಿ ಇಲ್ಲ
ತಲೆ ಕೆಳಗಾದರು ಕಥೆ ಕುದುರೆ ಆಗೋಲ್ಲ
ನಮ್ಮ ಜೊತೆ ನೀವೆಂದೂ ಸರಿ ಸಮ ಆಗೋಲ್ಲ
ಪ್ರೀತಿ ಗೀತಿ ಮಾತೆಲ್ಲ ನಮ್ಮ ಬಲಿ ಸಾಗಲ್ಲ
ಹಣ ಬಲ ಇದ್ದಾಗ ಯಾರ ಹಂಗೂ ಬೇಕಿಲ್ಲ

ಇಂಥಾ ಸೊಕ್ಕು ಯೇಕೆ ಇದು ಒಳ್ಳೆದಲ್ಲ ಜೋಕೆ
ಇಂಥಾ ಸೊಕ್ಕು ಯೇಕೆ ಇದು ಒಳ್ಳೆದಲ್ಲ ಜೋಕೆ
ಕೂಲಿ ಕೊಟ್ಟು ಜನರ ನೀ ಕೊಲ್ಲಲಾರೆ ಮಂಕೆ
ಬಾರಿ ಹಣದ ಫಲವು ಇಲ್ಲ ಬಿಡು ಮೇಲು ಕೀಳು ಎಲ್ಲ
ಇದೇ ಬಾಳ ಸಂದೇಶ ಹಿರಿದಾದ ಸಂತೋಷ

ಅಣ್ಣಯ್ಯ ತಮ್ಮಯ್ಯ