ಕಾಡಲ್ಲಿದ್ದ ಹಕ್ಕಿಯೊಂದು ಊರಿಗೆ ಬಂದಿತ್ತು - The Indic Lyrics Database

ಕಾಡಲ್ಲಿದ್ದ ಹಕ್ಕಿಯೊಂದು ಊರಿಗೆ ಬಂದಿತ್ತು

गीतकार - Doddarange Gowda | गायक - S. P. Balasubrahmanyam | संगीत - S. P. Balasubrahmanyam | फ़िल्म - Nenapina Doni | वर्ष - 1986

Song link

View in Roman

ಕಾಡಲ್ಲಿದ್ದ ಹಕ್ಕಿಯೊಂದು ಊರಿಗೆ ಬಂದಿತ್ತು
ಕಾಡಲ್ಲಿದ್ದ ಹಕ್ಕಿಯೊಂದು ಊರಿಗೆ ಬಂದಿತ್ತು
ಊರಲ್ಲಿದ್ದ ಹಕ್ಕಿ ಜೊತೆಗೆ ಸ್ನೇಹ ಬೆಳೆಸಿತು
ಸ್ನೇಹಾ ಬೆಳೆದಿತ್ತು

ಪ್ರೇಮದಿಂದ ರೆಕ್ಕೆ ಬಿಚ್ಚಿ ಮುಗಿಲಲ್ಲಿ ತೇಲಿದವು
ಯೆಂದು ಬಿಡದ ಬಂಧನದಲ್ಲಿ ಜೋಡಿಯು ನಲಿದಿತ್ತು
ತುಂಬಿದ ಆಸೆಯ ಕಾಡಿನ ಹಕ್ಕಿ ಗೂಡನು ಕಟ್ಟಿತ್ತು
ಮೆತ್ತನೆ ಹತ್ತಿ ಮಿಂಚಿನ ಹುಲುವನು ಗೂಡಲಿ ಹಾಕಿತ್ತು

ಕೊಕ್ಕಿನ ತುಡಿಯಲಿ ಹಣ್ಣನು ತಂದು ರಾಶಿಯ ತುಂಬಿತ್ತು
ನಲ್ಲೇಗೆ ಕಾಡ ಕಾಡಿನ ಹಕ್ಕಿಗೆ ದುಗುಡವ ತಂದಿತ್ತು

ಹೀಗೇ ಪಾಪ ಅದು ಕಾಯ್ತಿದ್ದಗ ಅಲ್ಲಿ

ಊರಿನ ಹಕ್ಕಿಯು ಹದ್ದಿನ ಸೆರೆಯಲಿ ಸಿಕ್ಕುತ ನರಳಿತ್ತು
ಇದನ್ನಾರಿಯದ ಕಾಡಿನ ಹಕ್ಕಿಯು ನಲ್ಲೆಗೆ ಕಾಡಿತ್ತು
ಬಾರದ ನಲ್ಲೆಗೆ ಹುಡುಕುತ ಹಾರಿತು ಗುಡ್ಡದ ತೋಪಿನಲಿ
ಗರಿ ಗರಿ ಸಿಕ್ಕಿ ಮುಲ್ಲಿಗೆ ಚುಚ್ಚಿ ಬಲಳಿತು ನೋವಿನಲಿ
ಗರಿ ಗರಿ ಸಿಕ್ಕಿ ಮುಲ್ಲಿಗೆ ಚುಚ್ಚಿ ಬಲಳಿತು ನೋವಿನಲಿ

ವಿರಹಿಗಳಾದವು ಹಕ್ಕಿಗಳೆರಡು ಸೋಲಿನ ಹಾದಿಯಲಿ
ಮುರಿಯುತ್ತ ಬಿದ್ದವು ಪ್ರೇಮದ ರೆಕ್ಕೆಯು ದುಃಖದ ಮದುವಿನಲಿ

ಕಾಡಿನ ಹಕ್ಕಿಯು ನಡೆಯುತ ದೂರದ ಗಿರಿ ಕಡೆಗೆ
ಹದ್ದಿನ ಸೆರೆಮನೆ ಪಕ್ಕವೇ ಮಾಡಿ ಗೂಡನು ದಿನದೊಳಗೆ
ಬೆರಗನು ತಂದಿತು ನಲ್ಲೆಯು ಕಂಡಳು ಪಕ್ಕದ ಮದೀನಲಿ
ಎದುರಿದ್ದರೂ ಹಕ್ಕಿಗಳೆರಡು ನರಳಿವೆ ಮೂಕದಲಿ
ಎದುರಿದ್ದರೂ ಹಕ್ಕಿಗಳೆರಡು ನರಳಿವೆ ಮೂಕದಲಿ

ವಿರಹದ ಸುಳಿಯಲಿ ಸಿಲುಕಿದ ಹಕ್ಕಿಯ ಬಾಳಿಗೆ ಕೊನೆ ಯೆಲ್ಲಿ
ಯೆಂದು ಮುಗಿಯದ ಈ ಕಥೆಯಲ್ಲಿ ಪ್ರೇಮದ ನೆಲೆ ಯೆಲ್ಲಿ
ಪ್ರೇಮದ ನೆಲೆ ಯೆಲ್ಲಿ ಪ್ರೇಮದ ನೆಲೆ ಯೆಲ್ಲಿ ಪ್ರೇಮದ ನೆಲೆ ಯೆಲ್ಲಿ