ಜೇನಿನ ಹೊಲೆಯೋ ಹಾಲಿನ ಮಳೆಯೋ - The Indic Lyrics Database

ಜೇನಿನ ಹೊಲೆಯೋ ಹಾಲಿನ ಮಳೆಯೋ

गीतकार - Chi. Udayashankar | गायक - Dr. Rajkumar | संगीत - Rajan-Nagendra | फ़िल्म - Chalisuva Modagalu | वर्ष - 1982

Song link

View in Roman

ಜೇನಿನ ಹೊಲೆಯೋ ಹಾಲಿನ ಮಳೆಯೋ
ಸುಧೆಯೋ ಕನ್ನಡ ಸವಿ ನುಡಿಯೋ
ಜೇನಿನ ಹೊಲೆಯೋ ಹಾಲಿನ ಮಳೆಯೋ
ಸುಧೆಯೋ ಕನ್ನಡ ಸವಿ ನುಡಿಯೋ
ವಾಣಿಯ ವೀಣೆಯ ಸ್ವರ ಮಾಧುರ್ಯವೋ
ಸುಮಧುರ ಸುಂದರ ನುಡಿಯೋ.. ಆ..

ಜೇನಿನ ಹೊಲೆಯೋ ಹಾಲಿನ ಮಳೆಯೋ
ಸುಧೆಯೋ ಕನ್ನಡ ಸವಿ ನುಡಿಯೋ

ಕವಿ ನುಡಿ ಕೋಗಿಲೆ ಹಾಡಿದ ಹಾಗೆ
ದಪದ ನಿಸರಿ ಗಪಾಪ ದಾಸರಿದಾಸ
ಸವಿ ನುಡಿ ತನ್ನನೆ ಗಾಳಿಯ ಹಾಗೆ

ಕವಿ ನುಡಿ ಕೋಗಿಲೆ ಹಾಡಿದ ಹಾಗೆ
ಸವಿ ನುಡಿ ತನ್ನನೆ ಗಾಳಿಯ ಹಾಗೆ
ಒಲವಿನ ಮಾತುಗಳಾಡುತಲಿರಲು
ಮಲ್ಲಿಗೆ ಹೂಗಳು ಅರಳಿದ ಹಾಗೆ

ಮಕ್ಕಳು ನುಡಿದರೆ ಸಕ್ಕರೆಯಂತೇ
ಅಕ್ಕರೆ ನುಡಿಗಳು ಮುತ್ತುಗಲಂತೆ
ಪ್ರೀತಿಯ ನೀತಿಯ ಮಾತುಗಳೆಲ್ಲ
ಸುಮಧುರ ಸುಂದರ ನುಡಿಯೋ

ಜೇನಿನ ಹೊಲೆಯೋ ಹಾಲಿನ ಮಳೆಯೋ
ಸುಧೆಯೋ ಕನ್ನಡ ಸವಿ ನುಡಿಯೋ

ಕುಮಾರವ್ಯಾಸನ ಕಾವ್ಯದ ಚಂಡ
ಕವಿ ಸರ್ವಜ್ಞಾನ ಪದಗಳು ಅಂದ
ಕುಮಾರವ್ಯಾಸನ ಕಾವ್ಯದ ಚಂದ
ಕವಿ ಸರ್ವಜ್ಞಾನ ಪದಗಳು ಅಂದ
ದಾಸರು ಶರಣರು ನಾಡಿಗೆ ನೀಡಿದ
ಭಕ್ತಿಯ ಗೀತೆಗಳ ಪರಮಾನಂದ
ರನ್ನನು ರಾಚಿಸಿದ ಹೊನ್ನಿನ ನುಡಿಯು
ಪಂಪನು ಹಾಡಿದ ಚಿನ್ನದ ನುಡಿಯು
ಕನ್ನಡ ತಾಯಿಯು ನೀಡಿದ ವರವು
ಸುಮಧುರ ಸುಂದರ ನುಡಿಯು

ಜೇನಿನ ಹೊಲೆಯೋ ಹಾಲಿನ ಮಳೆಯೋ
ಸುಧೆಯೋ ಕನ್ನಡ ಸವಿ ನುಡಿಯೋ
ಜೇನಿನ ಹೊಲೆಯೋ ಹಾಲಿನ ಮಳೆಯೋ
ಸುಧೆಯೋ ಕನ್ನಡ ಸವಿ ನುಡಿಯೋ
ವಾಣಿಯ ವೀಣೆಯ ಸ್ವರ ಮಾಧುರ್ಯವೋ
ಸುಮಧುರ ಸುಂದರ ನುಡಿಯೋ.. ಆ..

ಜೇನಿನ ಹೊಲೆಯೋ ಹಾಲಿನ ಮಳೆಯೋ
ಸುಧೆಯೋ ಕನ್ನಡ ಸವಿ ನುಡಿಯೋ
ಸುಧೆಯೋ ಕನ್ನಡ ಸವಿ ನುಡಿಯೋ..