ದಮ್ಮ ದಮ್ಮ ದಮ - The Indic Lyrics Database

ದಮ್ಮ ದಮ್ಮ ದಮ

गीतकार - V. Manohar | गायक - Anuradha Bhat, C. V. Santhosh | संगीत - V. Manohar | फ़िल्म - Kiraathaka | वर्ष - 2011

Song link

View in Roman

ಚುಕ್ಕಿ ಚುಕ್ಕಿ ಬೆಳ್ಳಿ ಚುಕ್ಕಿ
ಮುದ್ದು ಚುಕ್ಕಿ ನಾನು ನಿನ್ನ
ಧ್ಯಾನ ಮಾಡಿ ಮಾಡಿ ಪ್ರೇಮ ಋಷಿಯಾದೆ

ಮತ್ತೇ ಮತ್ತೇ ಕಾಡಿ ಕಾಡಿ
ಬೇಡಿಕೊಂಡ ನಂತರವೇ ಆಹಾ ಕೊನೆಗೂ ನೀ ಒಲಿದೆ

ದಮ್ಮ ದಮ್ಮ ದಮ ದಮ ದಮ್ಮ|3|

ಸಣ್ಣ ಪುಟ್ಟ ಕನಸಿಗೆಲ್ಲಾ
ಕಣ್ಣಿಗೆ ಜಾಗವಿಲ್ಲ
ನಿನ್ನ ಬಿಂಬ ಜಂಬದಿಂದ ತುಂಬಿಕೊಂಡೈತೆ
ಮೇಷ್ಟ್ರು ಹೇಳೋ ಪಾತವೆಲ್ಲಾ
ಕಿವಿಯ ಮ್ಯಾಲೆ ಬೀಳದಲ್ಲಾ
ನಿನ್ನ ಮಾತು ತುಂಬಿ ಮುತ್ತು ಸದ್ದು ಮಾಡೈತೆ

ನಿಂಗೂ ಹಂಗ ಇಲ್ಲಿ ನಂಗು ಹಂಗೆ
ನೀನೆ ನಂಗೆ ದನಿವಾರಿಸೋ ಗಂಗೆ
ತಾಲೆಯ ತುಂಬ ಮಠತ್ತೆರೊ ಗುಂಗೆ
ಮನಸು ನಿಂಗೆ ಶರಣಾಯ್ತು ಹೆಂಗೆ
ಬ್ರಹ್ಮ ಬರೆದಿಟ್ಟ ನನ್ನ ಜಾತಕನೆ
ತಿದ್ದಿದೊಳೆ ನಿನ್ನನ್ ನೋಡಿದಾಗಿನಿಂದ ನಿತ್ಯ ಹುಣ್ಣಿಮೆ
ನಿನ್ನ ಸಿಹಿ ನೆನಪಾಲಿ ನರ ನರ ಸಡಗರ
ನನ್ನ ಪಾಲಿಗೆ ನೀನೆ ಜೀವ ಚಿಲುಮೆ

ದಮ್ಮ ದಮ್ಮ ದಮ ದಮ ದಮ್ಮ ಹೂಊ

ಹೆಜ್ಜೆಯಾಡಿ ಮೆತ್ತೆಯಾಗಲ
ಗೆಜ್ಜೆಗಳ ಸದ್ದು ಆಗಲಾ
ಸೋಂಪದ ಪಾದ ಜೋಪಾನ ಒಲವೇ
ನೀನು ನಿಂತಿರೋ ಈ ನೆಲ ನನ್ನ ಪ್ರೇಮ ದೇಗುಲ
ನಿನ್ನ ಖಾಸ ದಾಸ ಅದೇ ನಾ ಚೆಲುವೆ

ಪುಂಡಾಡಿ ಆಡೋನು
ಕೊಂಡಾಡೋ ಗಂಡ ರೀ
ದೂರಾಗ ಬೇಡ ಯೆಂದೆಂದು
ಜಗದಲ್ಲಿ ನೀ ಜಾಣ
ಕಾಪಾಡೋ ನನ್ನಣ್ಣ
ಕದ್ದೋಯ್ಯೋ ಬೇಗ ಬಾ ಬಾ ಬಾ

ಚಿನ್ನ ನಿನ್ನ ಕಣ್ಣಲ್ಲೇ
ಕಟ್ಟುಬಿಟ್ಟೆಯಲ್ಲೇ ನನ್ನಾ
ಯೆನು ಮಂತ್ರ ಮಾಡಿ ಕಚ್ಚಿ ಮುದ್ದು ಚಿಟ್ಟೆಯೇ

ರಂಗು ರಂಗು ಮಾತಿನಲ್ಲಿ ರಂಗವಲ್ಲಿ ಇಟ್ಟವನೇ
ನೋಟದಲ್ಲಿ ಮಾತ ಮಾಡಿ ನಾಟಿ ಬಿಟ್ಟೆಯಾ
ನೀನೆ ಹೆನೆದ ಬಾಳೆಯೊಳಗೆ ಬಿದ್ದೆ
ಪ್ರೀತಿ ಮಾಲೆಗೆ ಸೂರ್ಯಾನೇ ಒಡ್ಡೆ
ಗಾಳಿ ಬಂದು ಉರಿಸಿದರೆ ಹಣತೆ
ಖಾಲಿ ಪುಟಕೆ ನೀನಾದೆ ಕವಿತೆ

ಬ್ರಹ್ಮ ಬರೆದಿಟ್ಟ ನನ್ನ ಜಾತಕನೆ
ತಿದ್ದಿದೊಳೆ ನಿನ್ನನ್ ನೋಡಿದಾಗಿನಿಂದ ನಿತ್ಯ ಹುಣ್ಣಿಮೆ
ನಿನ್ನ ಸಿಹಿ ನೆನಪಾಲಿ ನರ ನರ ಸಡಗರ
ನನ್ನ ಪಾಲಿಗೆ ನೀನೆ ಜೀವ ಚಿಲುಮೆ

ದಮ್ಮ ದಮ್ಮ ದಮ ದಮ ದಮ್ಮ ಹೂಊ