ನಾದವೇ ನನ್ನಿಂದ ದೂರಾದೆಯ - The Indic Lyrics Database

ನಾದವೇ ನನ್ನಿಂದ ದೂರಾದೆಯ

गीतकार - Shyamsundar Kulakarni | गायक - S.P. Balasubrahmanyam | संगीत - K. V. Mahadevan | फ़िल्म - Krishna Rukmini | वर्ष - 1988

Song link

View in Roman

ನಾದವೇ ನನ್ನಿಂದ ದೂರಾದೆಯ
ಜೀವವೇ ಒಡಲಿಂದ ಬೇರಾದೆಯ
ನಾದವೇ ನನ್ನಿಂದ ದೂರಾದೆಯ
ಜೀವವೇ ಒಡಲಿಂದ ಬೇರಾದೆಯ
ವೇದನೆ ರಾಗವ ವಿರಹದ ಲಯದಲಿ ಹೃದಯದಿ ಮೀಟಿದೆಯಾ

ನಾದವೇ ನನ್ನಿಂದ ದೂರಾದೆಯ
ಜೀವವೇ ಒಡಲಿಂದ ಬೇರಾದೆಯ

ಗೆಜ್ಜೆಗಳು ಕುಣಿದಾಗ ಮೂಜಗವು ಮರೆತಾಗ
ಹೊಮ್ಮಿರಲು ಅನುರಾಗ ಸುಖ ಕಂಡೆನು
ನಿನ್ನ ನಗು ಮರೆಯಾಗೆ ವೇಣುವಿದು ಮೂಕಾಗೆ
ಕಂಬನಿ ಹೊಳೆಯಲ್ಲಿ ನಾ ಮಿಂದೆನು

ದೈವವದು ಇರದಂಥ ಗುಡಿಯಾದೆನಾ
ರಸಹೀನ ಇಂದಾಯ್ತು ಈ ಜೀವನ
ವೇದನೆ ರಾಗವ ವಿರಹದ ಲಯದಲಿ ಹೃದಯದಿ ಮೀಟಿದೆಯಾ

ನಾದವೇ ನನ್ನಿಂದ ದೂರದೆಯ
ಜೀವವೇ ಒಡಲಿಂದ ಬೇರಡೆಯ

ಕನಸುಗಳು ಕಲೆತಾಗ, ಮನಸುಗಳು ಬೆರೆತಾಗ
ಪ್ರೇಮವೆನ್ನೋ ಅಲೆಯಲ್ಲಿ ನಾ ತೇಲಿದೆ
ಜನ್ಮಗಳ ಬಂಧನವೋ ಈ ನನ್ನ ತಪ ಫಲವೋ
ಆತ್ಮಗಳ ಸಮ್ಮಿಲನ ಸವಿ ನೋಡಿದೆ

ನಿನ್ನೊಲವ ಬೆಳಕಲ್ಲಿ ನಡೆದಾಡಿದೆ
ನೊಂದಿರುವೆ ಇರುಳಲ್ಲಿ ಗುರಿ ಕಾಣದೆ
ದೇಹಕೆ ಪ್ರಾಣವು ಆಯಿತೇ ಭಾರವು ಅಂತ್ಯವ ತೋರಿಸೆಯ

ನಾದವೇ ನನ್ನಿಂದ ದೂರಾದೆಯ
ಜೀವವೇ ಒಡಲಿಂದ ಬೇರಾದೆಯ
ವೇದನೆ ರಾಗವ ವಿರಹದ ಲಯದಲಿ ಹೃದಯದಿ ಮೀಟಿದೆಯಾ

ನಾದವೇ, ನಾದವೇ ನನ್ನಿಂದ ದೂರಾದೆಯ
ಜೀವವೇ ಒಡಲಿಂದ ಬೇರಾದೆಯ