ಮೀಸೆ ಹೊತ್ತ ಗಂಡಸಿಗೆ - The Indic Lyrics Database

ಮೀಸೆ ಹೊತ್ತ ಗಂಡಸಿಗೆ

गीतकार - Hamsalekha | गायक - S. P. Balasubrahmanyam | संगीत - Hamsalekha | फ़िल्म - Avale Nanna Hendthi | वर्ष - 1988

Song link

View in Roman

ಮೀಸೆ ಹೊತ್ತ ಗಂಡಸಿಗೆ ದೇಮಂದಪ್ಪೋ ದೇಮಂಡು
ಹೆಣ್ಣು ಕೊಟ್ಟ ಮಾವನಿಗೆ ರಾಮಂಡಪ್ಪೋ ರೆಮಂಡು

ಮೀಸೆ ಹೊತ್ತ ಗಂಡಸಿಗೆ ದೇಮಂದಪ್ಪೋ ದೇಮಂಡು
ಹೆಣ್ಣು ಕೊಟ್ಟ ಮಾವನಿಗೆ ರಾಮಂಡಪ್ಪೋ ರೆಮಂಡು
ಎಷ್ಟು ಕೊಟ್ರು ಸಾಲಲ್ಲ ಬೇಗತಾನ ಮುಗಿಯಲ್ಲ
ತಾಳಿ ಇನ್ನು ಕಟ್ಟಿಲ್ಲ ಮಾತು ಕಥೆ ಮುಗ್ದಿಲ್ಲ
ಹೆಣ್ಣಿಗೊಂದು ತಾಳಿ ಕಟ್ಟೋ
ಘಳಿಗೆಯಂತು ಇನ್ನು ಕೂಡಿ ಬಂದಿಲ್ಲ

ಮೀಸೆ ಹೊತ್ತ ಗಂಡಸಿಗೆ ದೇಮಂದಪ್ಪೋ ದೇಮಂಡು
ಹೆಣ್ಣು ಕೊಟ್ಟ ಮಾವನಿಗೆ ರಾಮಂಡಪ್ಪೋ ರೆಮಂಡು

ಹೆಣ್ಣು ಕೊಟ್ಟ ಮಾವನು ಕಣ್ಣು ಕೊಟ್ಟ ದೇವನು
ಹೆಣ್ಣು ಹೆತ್ತ ತಪ್ಪಿಗೆ ಕಾಲಿಗೆ ಬಿದ್ದಾರೋ
ಸಾಲ ಸೋಲ ಮಾಡಿಯೋ ಚಕ್ರ ಬದ್ದಿಯೋ
ದುಡ್ಡು ತಂದು ಒಟ್ಟಿಗೇ ಗಂಡಿಗೆ ಕೊಟ್ಟರೋ

ಸೂಟ್-ಯು ಬೂಟ್-ಯು ಬೇಕಂಥಾನೆ
ವಾಚ್-ಯು ಉಂಗ್ರ ಎಲ್ಲಂತಾನೆ
ಸ್ಕೂಟರು ತಂದು ನಿಲ್ಸಂತನೆ
ಮದುವೆ ಆಮೇಲಂಥಾನೆ
ಮಾತು ಕಥೆ ಮುಗ್ದಿಲ್ಲ ಊಊ ಓಊ
ಹೆಣ್ಣಿಗೊಂದು ತಾಳಿ ಕಟ್ಟೋ
ಪುಣ್ಯವಂತು ಇನ್ನು ಕೂಡಿ ಬಂದಿಲ್ಲ

ಮೀಸೆ ಹೊತ್ತ ಗಂಡಸಿಗೆ ದೇಮಂದಪ್ಪೋ ದೇಮಂಡು
ಹೆಣ್ಣು ಕೊಟ್ಟ ಮಾವನಿಗೆ ರಾಮಂಡಪ್ಪೋ ರೆಮಂಡು

ನಿಂತು ಹೋದ ಮದುವೆಗೆ ಬಂದು ಸೇರಿದವರಿಗೆ
ಮದುವೆ ಊಟದಡಿಗೆ ಸಂಡಿಗೆ ಚಿಂತನೆಯೊ
ದೇಶದಲ್ಲಿ ತಿನ್ನಲು ಅನ್ನವಿಲ್ಲದಿರಲು
ದಂಡ ಪಿಂಡಗಳಿಗೆ ಅನ್ನದ ಸಂತೆಯೊ

ಬಾಳೆದಿಂದು ಬಗೆ ಹೋಯ್ತು
ತೋರಣವು ಒನಗೆ ಹೋಯ್ತು
ತೆಂಗಿನ್ ಕಾಯ್ ನಿದ್ದೆ ಮಾಡ್ತು
ತಾಳಿಯಾಂತು ಯೋಚ್ನೆಗ್ ಬಿತ್ತು
ಅಕ್ಷತೆಗೆ ಕಾಲ ಬಂದಿಲ್ಲ ಊ ಊಊ
ಹೆಣ್ಣಿಗೊಂದು ತಾಳಿ ಕಟ್ಟೋ
ಯೋಗವಂತು ಇಲ್ಲವೇ ಇಲ್ಲ

ಮೀಸೆ ಹೊತ್ತ ಗಂಡಸಿಗೆ ದೇಮಂದಪ್ಪೋ ದೇಮಂಡು
ಹೆಣ್ಣು ಕೊಟ್ಟ ಮಾವನಿಗೆ ರಾಮಂಡಪ್ಪೋ ರೆಮಂಡು
ಮೀಸೆ ಹೊತ್ತ ಗಂಡಸಿಗೆ ದೇಮಂದಪ್ಪೋ ದೇಮಂಡು
ಹೆಣ್ಣು ಕೊಟ್ಟ ಮಾವನಿಗೆ ರಾಮಂಡಪ್ಪೋ ರೆಮಂಡು

ಮೀಸೆ ಹೊತ್ತ ಗಂಡಸಿಗೆ ದೇಮಂದಪ್ಪೋ ದೇಮಂಡು
ಹೆಣ್ಣು ಕೊಟ್ಟ ಮಾವನಿಗೆ ರಾಮಂಡಪ್ಪೋ ರೆಮಂಡು
ಎಷ್ಟಿ ಕೊಟ್ರು ಸಾಲಲ್ಲ ಬೇಗತಾನ ಮುಗಿಯಲ್ಲ
ತಾಳಿ ಇನ್ನು ಕಟ್ಟಿಲ್ಲ ಮಾತು ಕಥೆ ಮುಗ್ದಿಲ್ಲ
ಹೆಣ್ಣಿಗೊಂದು ತಾಳಿ ಕಟ್ಟೋ
ಘಳಿಗೆಯಂತು ಇನ್ನು ಕೂಡಿ ಬಂದಿಲ್ಲ