ಜುಮ್ಮ ಜುಮ್ಮ - The Indic Lyrics Database

ಜುಮ್ಮ ಜುಮ್ಮ

गीतकार - V Nagendra Prasad | गायक - Anuradha Bhat, Shwetha Mohan | संगीत - V Harikrishna | फ़िल्म - Munirathna Kurukshethra | वर्ष - 2019

Song link

View in Roman

ಸ – ಸರಸವರ ಸಾರ್ವಭೌಮ
ರಿ – ರಿಪು ವಿಮರ್ಧನ ನಿಸ್ಸೀಮ
ಗ – ಗಜ ಸಹಸ್ರ ಬಲಧಾಮ
ಮ – ಮಾನಿನಿ ಮಹಾಕಾಮ
ಪ – ಪರಮ ಪರಾಕ್ರಮ ನಾಮ
ದ – ಧಗದ್ಧಿಗಿತ ಧರಣೀ ಲಲಾಮ
ನಿ – ನಿರುಪಮಾ ಕುರುಕುಲ ಸೋಮ
ಸ ರಿ ಗ ಮ ಪ ದ ನಿ
ಸಾನಿದಪಮಗರಿಸ

ಜುಮ್ಮ ಜುಮ್ಮ ಜುಮ್ಮ ಜುಮ್
ಜುಮ್ಮ ಜುಮ್ಮ ಜುಮ್ಮ ಜುಮ್
ಅದರ ಮಧುರಸ ಜುಮ್
ಮಧುಪ ಮದನನೇ ಜುಮ್
ಕುರು ಸಾರ್ವಭೌಮನೆ
ಪಾದ ಇಡುತಿರೆ ದೇಹ ಪುಳಕಿತ ಜುಮ್
ಮಯನಾ ಸದನಾ ಇರಲೀ ಗಮನಾ
ರಸಿಕ ವಲ್ಲಭ ರಾಜ ಕೌಸ್ತುಭ
ಕೌರವೇಂದ್ರನೆ ಬಾರೋ

ಸ ರಿ ಗ ಮ ಪ ದ ನಿ
ಸಾನಿದಪಮಗರಿಸ
ಜುಮ್ಮ ಜುಮ್ಮ ಜುಮ್ಮ ಜುಮ್
ಜುಮ್ಮ ಜುಮ್ಮ ಜುಮ್ಮ ಜುಮ್
ಅದರ ಮಧುರಸ ಜುಮ್
ಮಧುಪ ಮದನನೇ ಜುಮ್

ಲಾ ಲಾ ಲ ಲೀಯ್ಯ ಲಾ
ಅಸ್ಸಾ

ನಖ ಶಿಖ ಕಂಪನ
ನಿನ್ನ ಸಿಹಿ ಚುಂಬನ
ತಿಮಿರು ನಗೆಯೇ ಆಪ್ಯಾಯಮಾನ
ಚಂದ ಚಂದ್ರ ವದನ
ನೀನೆದ್ದು ನಿಂತರೆ ಮುಗಿಲು ನೆತ್ತಿಗೆ ತಾಕಿದೆ ಕೌರವ
ಸ್ವೀಕರಿಸು ಸಿಂಹವೇ ಸಪ್ತ ಕನ್ಯೆಯ ಸ್ವಾಗತ ಕೌರವ
ಹಸ್ತಿನಾಪುರಿ ಸ್ವಸ್ತಿ ಚಂದ್ರಮ
ಕೌರವೇಂದ್ರನೆ ಬಾರೋ
ಸ ರ ಗ ಮ ಪ ದ ನಿ
ಸಾನಿದಪಮಗರಿಸ

ನಿನ್ನ ರಚನೆಯೇ ಜುಮ್
ನಡಿಗೆ ತಜುಮ್
ಗಗನ ಜಗನ ತಕಜುಮ್
ಅಸ್ಸಾ

 

ಮಹಾ ಮಹಾ ಮನ್ಮಥ
ಸಖಿ ಸುಖ ಸಮ್ಮತ
ರಮಣಿ ರವಲಿ ರೋಮಾಂಚ ದಾತ
ರಸ ಗುಣ ರಮಿತಾ
ಝೇಂಕಾರ ಮಾಡು ನೀ
ಮದನ ಮಂಚದಿ ಆಗಲಿ ಸಂಭವ
ಶೃಂಗಾರ ಸೌಧದ
ವಾಸ್ತು ತಿಳಿದಿರೋ ಮೋಹಿತಾ ಕೌರವ
ಸಪ್ತ ಸ್ವರಗಳ ಸುಪ್ತ ವಾದಕ
ಕೌರವೇಂದ್ರನೆ ಬಾರೋ

ಸ ರ ಗ ಮ ಪ ದ ನಿ
ಸಾನಿದಪಮಗರಿಸ
ಜುಮ್ಮ ಜುಮ್ಮ ಜುಮ್ಮ ಜುಮ್
ಜುಮ್ಮ ಜುಮ್ಮ ಜುಮ್ಮ ಜುಮ್
ಅದರ ಮಧುರಸ ಜುಮ್
ಮಧುಪ ಮದನನೇ ಜುಮ್