ಹೇ ಹುಡುಗೀ ನಗುತಾ ನೋಡು - The Indic Lyrics Database

ಹೇ ಹುಡುಗೀ ನಗುತಾ ನೋಡು

गीतकार - Hamsalekha | गायक - S. P. Balasubrahmanyam, Vani Jayaram | संगीत - Hamsalekha | फ़िल्म - Avale Nanna Hendthi | वर्ष - 1988

Song link

View in Roman

ಹೇ ಹುಡುಗೀ ನಗುತಾ ನೋಡು ಸ್ವಲ್ಪ
ನೀನೀಗ ಜೀವ ಬಂದ ಶಿಲ್ಪಾ
ನೀ ನಕ್ಕರೆ ಅದು ಸಕ್ಕರೆ
ನೋಡ್ ನೀ ಸ್ವಲ್ಪ ಮಾತಾಡೆ ಶಿಲ್ಪಾ
ನಾನೀಗ ನಿನ್ನ ಪ್ರೇಮ ಕಲ್ಪ

ಹೇ ಹುಡುಗ ನಾನು ಇನ್ನು ಕನ್ಯೆ
ನೀ ಹೀಗೇ ನೋಡಬೇಡ ನನ್ನೆ
ನೀ ಸಿಕ್ಕರೆ ಅದು ಸಕ್ಕರೆ
ನಾನ್ ಇನ್ನು ಕನ್ಯೆ ನೋಡದಿರು ನೀ ನನ್ನೆ
ನೋಡಿಲ್ಲಿ ಕೆಂಪಗಾಯ್ತು ಕೆನ್ನೆ

ರಥೋ ರಥೋ ರಾಯನ ಮಗಳೆ
ರಥೋ ರಥೋ ಬಾ
ಹಾದಿರೆಮ್ಮೆಯ ಕಾಯೋಕೆ ನಾನೇ ಬರಬೇಕು
ಬಿತ್ತೋ ಬಿತ್ತೋ ಭೀಮನ ಮಗಳೇ
ಬಿತ್ತೋ  ಬಿತ್ತೋ ಬಿತ್ತೋ ಬಾ
ಹಾಡಿನೆಲ್ ಎಕರೆ ಬೆಳೆಯೋಕೆ ಬುತ್ತಿಯ ತರಬೇಕು

ಹೂಗಂಧ ಮುಡಿಸಿ
ಮದುವೆ ಸೀರೆ ಉಡಿಸಿ
ಒಡವೆ ಎಲ್ಲ ತೊಡಿಸಿ
ಮೆತ್ತೆ ಮೇಲೆ ನಡೆಸಿ
ನಾನಿನ್ನ ರಾಣಿ ಮಾಡುವೆ

ಹೇ ಹುಡುಗ ಹೇ ಹೇ ಹುಡುಗ
ನಾನೂ ಇನ್ನು ಕನ್ಯೆ
ನೀ ಹೀಗೇ ನೋಡಬೇಡ ನನ್ನೆ
ನೀ ಸಿಕ್ಕರೆ ಅದು ಸಕ್ಕರೆ
ನಾನ್ ಇನ್ನು ಕನ್ಯೆ ನೋಡದಿರು ನೀ ನನ್ನೆ
ನೋಡ್ ನೀ ಸ್ವಲ್ಪ ಮಾತಾಡೆ ಶಿಲ್ಪಾ
ನಾನೀಗ ನಿನ್ನ ಪ್ರೇಮ ಕಲ್ಪ

ಕಣ್ಣ ಮುಚ್ಚೆ ಕಡೆ ಗೂಡೇ
ಮುದ್ದಿನ ಮೂಟೆ ಬಾ
ಮುದ್ದಿಸಿ ನನ್ನ ಕಾಡೋದು
ಬೇಡಯ್ಯ ನನ್ನ ಚೆನ್ನ

ಅವಲಕ್ಕಿ ಬುವಲಕ್ಕಿ ಕಾಂಚನ ಮಿನ ಮಿನಾ
ಹೊನ್ನಿನ ಗಿಣಿಯೇ ಬಾ
ಮೆಚ್ಚಿಸಿ ನನ್ನ ಕಾಡೋದು ಬೇಡಯ್ಯ ನನ್ನ ರನ್ನ
ಹೇ ಇದೇನಿದು ಕನಸೋ ಇದೇನಿದು ನನಸೋ
ಇದೇನಿದು ವಯಸ್ಸೋ ಇದೇನಿದು ಸೊಗಸೋ
ಬಾ ನಿನ್ನ ರಾಣಿ ಮಾಡುವೆ
ಹೇ ಹೇ ಹೇ ಹೇ

ಹೇ ಹುಡುಗೀ ನಗುತಾ ನೋಡು ಸ್ವಲ್ಪ
ನೀನೀಗ ಜೀವ ಬಂದ ಶಿಲ್ಪಾ
ನೀ ನಕ್ಕರೆ ಅದು ಸಕ್ಕರೆ
ನಾನ್ ಇನ್ನು ಕನ್ಯೆ ನೋಡದಿರು ನೀ ನನ್ನೆ
ನೋಡಿಲ್ಲಿ ಕೆಂಪಗಾಯ್ತು ಕೆನ್ನೆ