ನೀನು ಹತ್ತೀರ ಇದ್ದಿದ್ದರೆ - The Indic Lyrics Database

ನೀನು ಹತ್ತೀರ ಇದ್ದಿದ್ದರೆ

गीतकार - Hamsalekha | गायक - S. P. Balasubrahmanyam, Vani Jayaram | संगीत - Hamsalekha | फ़िल्म - Avale Nanna Hendthi | वर्ष - 1988

Song link

View in Roman

ನೀನು ಹತ್ತೀರ ಇದ್ದಿದ್ದರೆ ನೀನು ಚಂದವೋ
ನನ್ನ ಮುತ್ತಿಗೆ ಸಿಕ್ಕಿದರೇ ಆಹಾ ಏನು ಅಂದವೋ
ನೀನು ಹತ್ತೀರ ಇದ್ದಿದ್ದರೆ ನೀನು ಚಂದವೋ
ನನ್ನ ಮುತ್ತಿಗೆ ಸಿಕ್ಕಿದರೇ ಆಹಾ ಏನು ಅಂದವೋ

ಬಾರೋ ಚಂದಿರ ನನ್ನ ಹತ್ತೀರ
ಬಾರೋ ಸುಂದರ ಇನ್ನು ಹತ್ತೀರ

|ನೀನು ಹತ್ತೀರ —— ಯೆನು ಅಂದವೋ|

ಮಿನುಗಿತ್ತಿರೋ ಲಕ್ಷಾಂತರ ನಕ್ಷತ್ರದ
ರಂಗೋಲಿಯ ಸಿಂಗಾರವು ನೀನು
ಸುಂದರ ಚಿತ್ತಾರವು ನೀನು
ನಿನ್ನಯ ಬೆಳ್ಳಿಯ ಕಿರಣ
ಈ ಭೂಮಿಗೆ ಕಟ್ಟಿದ ತೋರಣ
ನಿನ್ನಯ ಮೋಹಕ ಕಿರಣ
ನಾವಿಬ್ಬರು ಸೇರಲು ಕಾರಣ

ನಾನಿಲ್ಲಿ ಭೂಮಿಯಲಿ
ನೀನೇನೋ ಬಾನಿನಲಿ
ನಾ ಹೇಗೆ ಕೇಳಲಿ
ಈ ನನ್ನ ಹಾಡಿನಲಿ
ಬಾರೋ ಇಲ್ಲಿಗೆ ಕೇಳೋ ಮೆಲ್ಲಗೆ

ನೀನು ಹತ್ತೀರ ಇದ್ದಿದ್ದರೆ ನೀನು ಚಂದವೋ
ನನ್ನ ಮುತ್ತಿಗೆ ಸಿಕ್ಕಿದರೇ ಆಹಾ ಏನು ಅಂದವೋ

ಬೆಳದಿಂಗಳ ಬಯಲಲ್ಲಿನ ತಾಪೆರೆಯುವ
ನೆರಳಲ್ಲಿನ ತಂಗಾಳಿಯು ನೀನು
ತನ್ನನೆ ಪನ್ನೀರಿನ ಜೇನು

ಬಾನಳ್ಳಿ ಇದ್ದರೇ ಯೇನು
ನೀನಿದ್ದಲಿ ಇರುವೆ ನಾನು
ನೀನಿದ್ದರೇನೆ ನಾನೂ
ಈ ಬೆಸುಗೆ ಗೊತ್ತಿಲ್ಲವೆನು

ಈ ನೀಲಿ ಬಾನಿನಲ್ಲಿ
ತರರ ಸಮೂಹದಲಿ
ನಿನ್ನಣ್ಣ ಕಾಯುತಲಿ
ನಾ ಹೇಗೇ ಜೀವಿಸಲಿ
ಬಾರೆ ಇಲ್ಲಿಗೆ ಸೆರೆ ಮೆಲ್ಲಗೆ

ನೀನು ಹತ್ತೀರ ಇದ್ದಿದ್ದರೆ ನೀನು ಚಂದವೋ
ನನ್ನ ಮುತ್ತಿಗೆ ಸಿಕ್ಕಿದರೇ ಆಹಾ ಏನು ಅಂದವೋ
ಬಾರೋ ಚಂದಿರ ನನ್ನ ಹತ್ತೀರ
ಬಾರೋ ಸುಂದರ ಇನ್ನು ಹತ್ತೀರ