ಅಮ್ಮ ನೀನು ನಮಗಾಗಿ - The Indic Lyrics Database

ಅಮ್ಮ ನೀನು ನಮಗಾಗಿ

गीतकार - Chi. Udayashankar | गायक - Rajkumar, P. B. Sreenivas | संगीत - Chellapilla Satyam | फ़िल्म - Keralida Simha | वर्ष - 1981

Song link

View in Roman

ಅಮ್ಮ ನೀನು ನಮಗಾಗಿ
ಸಾವಿರ ವರುಷ ಸುಖವಾಗಿ
ಬಾಳಲೇ ಬೇಕು ಈ ಮನೆ ಬೆಳಕಾಗಿ

ಅಮ್ಮ ನೀನು ನಮಗಾಗಿ
ಸಾವಿರ ವರುಷ ಸುಖವಾಗಿ
ಬಾಳಲೇ ಬೇಕು ಈ ಮನೆ ಬೆಳಕಾಗಿ

ಅಮ್ಮ ನೀನು ನಮಗಾಗಿ
ಸಾವಿರ ವರುಷ ಸುಖವಾಗಿ

ಬಾಡದ ತಾವರೆ ಹೂವಿನ ಹಾಗೆ
ಎಂಡಿಗು ಆರದ ಜ್ಯೋತಿಯ ಹಾಗೆ

ಗೋಪುರವೇರಿದ ಕಲಶದ ಹಾಗೆ
ಆ ಧ್ರುವ ತಾರೆಯೇ ನಾಚುವ ಹಾಗೆ

ಜೊತೆಯಲಿ ಎಂದೆಂದು ನೀನಿರಬೇಕು
ಬೇರೆ ಯಾವು ಬೇಡವು ಸಾಕು

ಅಮ್ಮ ನೀನು ನಮಗಾಗಿ
ಸಾವಿರ ವರುಷ ಸುಖವಾಗಿ

ಸಂಜೆಯ ಗಾಳಿಯ ತಂಪಿನ ಹಾಗೆ
ಮಲ್ಲಿಗೆ ಹೂವಿನ ಕಂಪಿನ ಹಾಗೆ

ಜೀವವ ತುಂಬುವ ಉಸಿರಿನ ಹಾಗೆ
ನಮ್ಮನು ಸೇರಿ ಎಂಡಿಗೂ ಹೀಗೇ

ನಗುತಲಿ ಒಂದಾಗಿ ನೀನಿರಬೇಕು
ನಿನ್ನ ನೆರಳಲಿ ನಾವಿರಬೇಕು

ಅಮ್ಮ ನೀನು ನಮಗಾಗಿ
ಸಾವಿರ ವರುಷ ಸುಖವಾಗಿ

ಸಾವಿರ ನಾಡಿಗಳು ಸೇರಿದರೆನು
ಸಾಗರಕೆ ಸಮಾನಾಗುವುದೆನು

ಶತಕೋಟಿ ದೇವರು ಹರಸಿದರೆನು
ಅಮ್ಮನ ಹರಕೆಗೆ ಸರಿಸಾಟಿಯೇನು

ತಾಯಿಗೆ ಆನಂದ ತಂದರೆ ಸಾಕು
ಬೇರೆ ಪೂಜೆ ಏತಕೆ ಬೇಕು

ಅಮ್ಮ ನೀನು ನಮಗಾಗಿ
ಸಾವಿರ ವರುಷ ಸುಖವಾಗಿ
ಬಾಳಲೇ ಬೇಕು ಈ ಮನೆ ಬೆಳಕಾಗಿ

ಅಮ್ಮ ನೀನು ನಮಗಾಗಿ..
ಸಾವಿರ ವರುಷ ಸುಖವಾಗಿ ।।