ಜಯ ರತ್ನಕಾರ - The Indic Lyrics Database

ಜಯ ರತ್ನಕಾರ

गीतकार - Chethan Kumar | गायक - Sunil Gujagonda | संगीत - Arjun Janya | फ़िल्म - Bharaate | वर्ष - 2019

Song link

View in Roman

ಮಣ್ಣಿನ ಮಗನು ಇವನೂ ಕೊಡುಗೈದಾನೀ
ಚಿನ್ನದ ಮಗನು ಇವನೂ
ಅದ್ಭುತ ಜ್ಞಾನೀ
ಜನ ಸೇವೆಗೆಂದೇ ಹುಟ್ಟಿರುವ ದೇವರ ಕುಲವೋ
ಇವರ ನೇರಳೇ ಬಡವರಿಗೆ
ನೂರ ಆನೆಯ ಬಲವೋ
ಈ ಮಣ್ಣಿಗೂ ಇವರ ಋಣವೈತೇ..
ಪ್ರತಿ ಉಸಿರು ಇವನೇ ನುಡಿದೈತೇ

ಜಯ ರತ್ನಕಾರ ಜಯ ರತ್ನಕಾರ
ಜಯ ರತ್ನಕಾರ ಜಯತೂ
ಜಯ ರತ್ನಕಾರ ಜಯ ರತ್ನಕಾರ
ಜಯ ರತ್ನಕಾರ ಜಯತೂ

ಮಣ್ಣಿನ ಮಗನು ಇವನೂ ಕೊಡುಗೈದಾನೀ
ಚಿನ್ನದ ಮಗನು ಇವನೂ
ಅದ್ಭುತ ಜ್ಞಾನೀ

ಚಂದ್ರ ಚೂಡಾಮಣಿ ವಜ್ರ ನಾಗಮಣಿ
ಮುತ್ತು ರತ್ನಗಳ ಗಣಿ

ಜನರ ಮನಸಿನ ಪ್ರತಿಧ್ವನೀ
ಕನ್ನಡ ಕುಲದ ಕಣ್ಮಣಿ

 

ದೈವ ಗೆದ್ದ ಮುನಿ
ಜೀವ ಕಾಯೋ ಧಣಿ ಮಣ್ಣೇ ನಿನಗೇ ಚಿರಋಣಿ

ಯಮನ ತಡೆದೆಯೋ ರಾಜ ನೀ
ಧರೆಗೆ ಒಲಿದ ಸೌಭಾಗ್ಯ ನೀ

ಕೋಟಿಗೊಂದು ಮನೆತನವು
ದಾನವೇ ಇವರಿಗೇ ಸಿರಿತನವೋ
ನ್ಯಾಯ ನೀತಿಗೆ ಕನ್ನಡಿಯೋ
ಸತ್ಯಧರ್ಮಕ್ಕೇ ಮುನ್ನುಡಿಯೋ

ಜಯ ರತ್ನಕಾರ ಜಯ ರತ್ನಕಾರ
ಜಯ ರತ್ನಕಾರ ಜಯತೂ
ಜಯ ರತ್ನಕಾರ ಜಯ ರತ್ನಕಾರ
ಜಯ ರತ್ನಕಾರ ಜಯತೂ