ಮನಸಿದು ಹಕ್ಕಿಯ ಗೂಡು - The Indic Lyrics Database

ಮನಸಿದು ಹಕ್ಕಿಯ ಗೂಡು

गीतकार - Hamsalekha | गायक - S. P. Balasubrahmanyam, Lata Hamsalekha | संगीत - Hamsalekha | फ़िल्म - Avale Nanna Hendthi | वर्ष - 1988

Song link

View in Roman

ಕೂ ಕೂ ಕುಕು ಕೂ
ಕು ಕು ಕು ಕು ಕು ಕೂ

ಮನಸಿದು ಹಕ್ಕಿಯ ಗೂಡು
ಇದರೊಳಗಡೆ ಯೇನಿದೆ ನೋಡು
ಮನಸಿದು ಹಕ್ಕಿಯ ಗೂಡು
ಇದರೊಳಗಡೆ ಯೇನಿದೆ ನೋಡು
ಆಸೆಯು ಅರಳುತ ಪುಟಿಯುತ
ಜಿಗಿಯುತ ಕರೆದಿದೆ ಬಾ

|ಮನಸಿದು ಹಕ್ಕಿಯ——ಕರೆದಿದೆ ಬಾ|

ಕೂ ಕೂ ಕುಕು ಕೂ
ಕು ಕು ಕು ಕು ಕು ಕೂ

ಕಣ್ಣು ಮುಚ್ಚಬಾಹುದು
ಕನಸು ಮುಚ್ಚಲಾರೆ
ಸೀರೆ ಸೇರ್ಗಿನಿಂದ
ಮನಸಿನಾಸೆ ಮುಚ್ಚಲಾರೆ

ನಾಚಿ ನಿಲ್ಲಬಹುದೆ
ನಡುಕ ತಾಳಲಾರೆ
ನನ್ನೀ ಯೌವ್ವನವನ್ನ
ಸವೆಯ ಬೇಡ ಎನ್ನಲಾರೆ

ಮಿಂಚಿನಂತ ನನ್ನ ಉಸಿರ ಗಾಳಿ ಸೋಕಿದಾಗ
ದೀಪದಂಚಿನಲ್ಲಿ ಉರಿವ

ಅಮ್ಮಾ ಅಮ್ಮಮ್ಮಮ್ಮ

ಮನಸಿದು ಹಕ್ಕಿಯ ಗೂಡು
ಇದರೊಳಗಡೆ ಯೇನಿದೆ ನೋಡು
ಮನಸಿದು ಹಕ್ಕಿಯ ಗೂಡು
ಇದರೊಳಗಡೆ ಯೇನಿದೆ ನೋಡು
ಆಸೆಯು ಅರಳುತ ಪುಟಿಯುತ
ಜಿಗಿಯುತ ಕರೆದಿದೆ ಬಾ

ಕೂ ಕೂ ಕುಕು ಕೂ
ಕು ಕು ಕು ಕು ಕು ಕೂ

ಆಸೆ ಮೂಡಬಹುದು
ಮುಗಿವ ಆಸೆ ಬೇಡ
ನಮ್ಮೀ ಸುಖದಾರಂಬಾ
ಅಂತ್ಯವಾಗುವುದೆಂದಿಗೂ ಬೇಡ

ದುಂಬಿ ಹೇಳಬಹುದು ಹೋಗಿ ಬರುವೆನೆಂದು
ಹೂವು ಹೇಳುವುದಿಲ್ಲ ಹೋಗಿ ಬಾರೋ ನೀನು ಎಂದು
ನಾನೂ ನೀನು ಬೇರೆಯಾಗೋ ಮಾತೆ ಇಲ್ಲ ಇನ್ನು
ನಾವು ಹೀಗೇ ಸೇರುವಾಗ ಯಾಕೆ ಪಾರ್ಟಿಶನ್ನು

ಅಮ್ಮಾ ಅಮ್ಮಮ್ಮಮ್ಮ

|ಮನಸಿದು ಹಕ್ಕಿಯ——ಕರೆದಿದೆ ಬಾ|

ಕೂ ಕೂ ಕುಕು ಕೂ
ಕು ಕು ಕು ಕು ಕು ಕೂ