ಧೃವತಾರೆ ಧೃವತಾರೆ - The Indic Lyrics Database

ಧೃವತಾರೆ ಧೃವತಾರೆ

गीतकार - V. Nagendra Prasad | गायक - Armaan Malik | संगीत - Arjun Janya | फ़िल्म - Pailwaan | वर्ष - 2019

Song link

View in Roman

ಧೃವತಾರೆ ಧೃವತಾರೆ
ಸಾವಿರಾರು ಧೃವತಾರೆ
ಭೂಮಿ ಮೇಲು ಇರುತಾರೆ
ಮಿಂಚಲು ಆಗದೆ ನೊಂದಿರೋ

ಧೃವತಾರೆ (ಧೃವತಾರೆ) ಧೃವತಾರೆ (ಧೃವತಾರೆ)
ಕಾಲದ ಚಕ್ರದ ಅಡಿಯಲ್ಲಿ
ಸಿಗುತಾರೆ (ಸಿಗುತಾರೆ) ಸಿಗುತಾರೆ (ಸಿಗುತಾರೆ)
ಯಾತಕೋ ಕಾಣೆ ಈ ಉಡುಗೊರೆ

ಕಣ್ಣು ಚುಚ್ಚಿ ಕಣ್ಣೆದುರು
ಕನ್ನಡಿ ಹಿಡಿಯೋ ವ್ಯಂಗ್ಯಾನ
ಏನು ಹೇಳಲಿ ಹೇಗೆ ತಾಳಲಿ

ಬೆಟ್ಟ ಹತ್ತೋ ಆಸೆನ
ಕೊಟ್ಟು ಮುರಿದ ಪಾದಾನ
ಅವನ ಜೂಜಲಿ ನಾವೆಲ್ಲಾ ಬಲಿ

ಪ್ರತಿ ಸ್ವಾತಿ ಮಳೆ ಹನಿಯು ಮುತ್ತು ಆಗಬೇಕು
ಮನುಜತ್ವ ಮೆರೆಯುವ ಕಾಲ ಬರಲೇಬೇಕು
ಸಮಪಾಲಿನ ಜೀವನ ಬೇಕು ಈ ದಿನ

 

ಧೃವತಾರೆ ಧೃವತಾರೆ
ಕಾಲದ ಚಕ್ರದ ಅಡಿಯಲ್ಲಿ
ಸಿಗುತಾರೆ ಸಿಗುತಾರೆ
ಯಾತಕೋ ಕಾಣೆ ಈ ಉಡುಗೊರೆ

ಚಂದ್ರ ಬೀದಿ ಹುಡುಗಾನೆ
ಸತ್ತು ಮತ್ತೆ ಹುಟ್ತಾನೆ
ಕೋಟಿ ತಾರೆಗಳು ಮೌನ ಪ್ರೇಕ್ಷಕ

ಬೆಳೆಯೋ ಪೈರು ಮೊಳಕೆಲಿ
ಚಿವುಟ್ಟೋರಿಲ್ಲಿ ಮಾಮೂಲಿ
ಬ್ರಹ್ಮ ಗೀಚಿದ, ಇಂತ ಜಾತಕ

ಇಡಿ ಭೂಮಿ ಎತ್ತುವ ಶಕ್ತಿ ಇರುವ ಧೀರ
ಹಸಿವಿಂದ ಸತ್ತರೆ ಕನಸು ಹೆಣದ ಭಾರ
ಇದು ಶಾಪವೋ? ಲೂಪವೋ? ಯಾರ ಪಾಪವೋ

ಧೃವತಾರೆ (ಧೃವತಾರೆ) ಧೃವತಾರೆ (ಧೃವತಾರೆ)
ಕಾಲದ ಚಕ್ರದ ಅಡಿಯಲ್ಲಿ
ಸಿಗುತಾರೆ (ಸಿಗುತಾರೆ) ಸಿಗುತಾರೆ (ಸಿಗುತಾರೆ)
ಯಾತಕೋ ಕಾಣೆ ಈ ಉಡುಗೊರೆ